Call: +91 988 005 8665, +91 961 149 6267
E-mail: info@sumanasakodavoor.com


ಹಿನ್ನೋಟ

ಆಶಯಗಳ ಆಗರ, ಅಪೇಕ್ಷೆಗಳ ಸಾಗರ, ಸ್ನೇಹ, ಸಹೋದರತ್ವದ ನೆಲೆಯಲ್ಲಿ ಸಂಸ್ಕøತಿ, ಸದ್ಗುಣ, ಸಂಪರ್ಕ, ಸಮುದಾಯ ಪ್ರಜ್ಞೆ, ವಿಶೇಷವಾಗಿ ಸಾಮಾಜಿಕ ಕಳಕಳಿಯೊಂದಿಗೆ ದಿನದಿಂದ ದಿನಕ್ಕೆ ಹೊಸ ಚೈತನ್ಯದೊಂದಿಗೆ ಸಾಗುತ್ತಾ ಬಂದ ಸಂಘಟನೆ ಸುಮನಸಾ ಕೊಡವೂರು. ಹಲವು ಹಂಬಲಗಳನ್ನು ಹೊತ್ತು, ನಿರೀಕ್ಷೆಗಳನ್ನು ಸಾಕಾರಗೊಳಿಸುತ್ತಾ ಅಚ್ಚಳಿಯದ ನೆನಪುಗಳೊಂದಿಗೆ ಹಚ್ಚಹಸಿರಾಗಿದೆ.

ಆಸಕ್ತ ಪ್ರತಿಭೆಗಳನ್ನು ಸನಿಹಕೆ ಸೆಳೆದು ಸಾರ್ಥಕ ವಿನ್ಯಾಸವನ್ನು ಮಾಡುತ್ತಾ ತುಂಬಿದ ಕೊಡ ತುಳುಕದ ಮಾದರಿಯಲ್ಲಿ ತಾಳ್ಮೆಯಿಂದ ಬೆನ್ನು ತಟ್ಟುತ್ತಾ, ತಿಳುವಳಿಕೆ ಮೂಡಿಸಿದ ಗುರುವರ್ಯರನೇಕರು ನಾಟಕ ರಂಗದ ಕನಸುಗಳಿಗೆ ಜೀವ ತುಂಬಿದರು. ಈ ತರಹದ ಬೆಳವಣಿಗೆಯ ಸೊಡರಿಗೆ ನಾಯಕತ್ವ ನೆಡುಬತ್ತಿಯಾಗಿ ನಿಂತವರು ಪ್ರಕಾಶ್ ಜಿ.ಕೊಡವೂರು. ಒಗ್ಗಟ್ಟಿನಲ್ಲಿ ಮಾತ್ರ ಬಲವಿದೆ ಎನ್ನುವುದನ್ನು ಸಂಯಮ, ಶಿಸ್ತಿನಿಂದ ತಿಳಿದು ಶ್ರಮಿಸಿದರು. ಪರಿವರ್ತನೆಗೊಂಡ ಸಂಸ್ಥೆಯ ಪ್ರಾಮಾಣಿಕ ಪ್ರಯತ್ನವನ್ನು ಗುರುತಿಸಿ ಕರ್ನಾಟಕ ಸರಕಾರ 2010ರಲ್ಲಿ “ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ” ನೀಡಿ ಗೌರವಿಸಿದೆ.

ರಂಗಾಸಕ್ತಿಯ ರಮ್ಯತೆಯಲ್ಲಿ ಗಮನ ಸೆಳೆವ ಗಮ್ಯ ಇದು

ಜನ ಜೀವನದ ಶೈಲಿ, ಸುಖದ ವೈವಿಧ್ಯತೆ ಆಕರ್ಷಣೀಯವಾಗಿ ಬದಲಾಗುತ್ತಿರುವಾಗ ಪ್ರತೀವರ್ಷ ಸಾಮಾಜಿಕ, ಪೌರಾಣಿಕ, ಅಸಂಗತ, ಐತಿಹಾಸಿಕದಂತಹ ವಸ್ತು ವಿಷಯಗಳನ್ನು ಆಯ್ದಕೊಂಡು ನಾಟಕವನ್ನು ಸಿದ್ಧ ಪಡಿಸಲಾಗುತ್ತಿದೆ. ಹೆಮ್ಮೆಯ ವಿವಿಧ ಕಲಾಕಾಣಿಕೆಗಳನ್ನು 500ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದೆ. ಪ್ರಯತ್ನಕ್ಕೆ ತಕ್ಕ ಪ್ರತಿಫಲವಾಗಿ ವಿವಿಧ ವಿನುತಿಯೊಡನೆ ರಾಷ್ಟ್ರ, ರಾಜ್ಯ, ಜಿಲ್ಲಾಮಟ್ಟದ ಮನ್ನಣೆಯ ಪಾರಿತೋಷಕವೂ ಒಲಿದಿದೆ.

ಸಾಮಾನ್ಯರನ್ನು ತಲುಪುವ ಉದ್ದೇಶದಿಂದ ಹಲವಾರು ನಾಟಕಗಳು ಬಾನುಲಿಯಲ್ಲಿ ಬಿತ್ತರಗೊಂಡಿದೆ. ಈಗಾಗಲೇ ಟೆಲಿಚಿತ್ರವೊಂದು ನಿರ್ಮಾಣಗೊಂಡಿದ್ದು, ದೃಶ್ಯ ಮಾಧ್ಯಮದಲ್ಲಿ ಪ್ರಸಾರ ಕಂಡಿದೆ. ಅಭಿರುಚಿಗೆ ಅಂಕಿತವೆಂಬತೆ ಪ್ರೇತವಿವಾಹ, ದಾಸ್ಯ ಸಂಕೋಲೆ ನಾಟಕಗಳು ಹಾಗೂ ಭಕ್ತಿ ದೀವಿಗೆ ಭಜನಾವಳಿ ಮುದ್ರಣ ಕೃತಿಗಳಾಗಿದೆ. ರಂಗಗೀತೆಗಳ ರಮ್ಯಗಾಯನದ ಧ್ವನಿಮುದ್ರಿಕೆಯನ್ನು ಅನಾವರಣಗೊಳಿಸಲಾಗಿದೆ. ಹೀಗೆಲ್ಲ ಸೃಜನಶೀಲತೆಯ ಹೊಂಬೆಳಕಿನಿಂದ ಸುಮನಸಾ ಸಹೃದಯಿಗರ ಸಂಪ್ರೀತಿ ಗಳಿಸಿದೆ.









ಕಾರ್ಯಕ್ರಮಗಳು

 

© copyright 2014. All rights reserved. Sumanasa Kodavoor
Webpresence by Infouna Technologies Pvt. Ltd.