Call: +91 988 005 8665, +91 961 149 6267
E-mail: info@sumanasakodavoor.com


ಮೆಲ್ನೋಟ

Sumanasa Kodavoor

ಬಣ್ಣಿಸಲೇ ಬಣ್ಣದ ಸಾಲು

ಸುಮನಸಾ ಹುಟ್ಟದ್ದೇ ಸೇವೆಗಾಗಿ.., ಒಂದೊಮ್ಮೆ ಕೊಡವೂರಲ್ಲಿ ಮನೆಯೊಂದಕ್ಕೆ ಬೆಂಕಿ ಬಿದ್ದ ಆರ್ತನಾದಕ್ಕೆ ಸ್ಪಂದಿಸಿ ಅಂದೇ ಮಾನವೀಯ ಮೌಲ್ಯಗಳ ಸಾಕಾರ ರೂಪದ ಬಳಗದೊಂದಿಗೆ ಅನಾವರಣಗೊಂಡಿತು. ಈ ಸಂತುಲಿತ ಮನಸ್ಸಿನ ಮುಹೂರ್ತಕ್ಕೆ 14 ವಸಂತಗಳು ಮಾಗಿಯಾಯ್ತು. ಪ್ರಾಮಾಣಿಕ ಪ್ರಯತ್ನಗಳ ಪರಿಶುದ್ಧತೆಯಿಂದ ಪರಿಣತಿಗೊಳ್ಳುವ ಇದರ ಪಥ ಪ್ರಗತಿಯೊಂದಿಗೆ ಪಕ್ವಗೊಂಡಿದೆ. ಒಡಲ ಒರತೆಯಂತಿರುವ ಕಲೆ, ಸಾಹಿತ್ಯ, ಸಂಗೀತ, ಜಾನಪದ, ಆರೋಗ್ಯ, ಶಿಕ್ಷಣ, ಕ್ರೀಡೆ.. ಇವೆಲ್ಲ ಸಪ್ತವರ್ಣದ ಶೋಭೆಯಾಗಿ ಸೇವಾ ಸಂತುಷ್ಟಿಯನ್ನು ಸ್ಪಷ್ಟಪಡಿಸುತ್ತಿದೆ.

ಒಡಲಾಳ

ನಿತ್ಯ ನಿರಂತರತೆಯಲ್ಲಿ ನೆಮ್ಮದಿಯ ನೆಲೆ ಬಯಸುತ್ತಿರುವವರೆಲ್ಲರಿಗೂ ನಿಯಮಕನೆನಿಸಿದ ಶ್ರೀಶಂಕರನಾರಾಯಣ ದೇವರ ಅನುಗ್ರಹದೊಂದಿಗೆ ಸಂತೃಪ್ತಿಯೊಡನೆ ಸಾಗುತ್ತಿರುವ ಸಂಸ್ಥೆಯೇ “ಸುಮನಸಾ ಕೊಡವೂರು”. ಸಮಾನ ಮನಸ್ಕರ ಸಹಮತದ ಆಲೋಚನೆಯು 2002ರಲ್ಲಿ ಸತ್ವಪೂರ್ಣ ಸಂಸ್ಥೆಯೊಂದರ ಸ್ಥಾಪನೆಗೆ ಸಂದÀರ್ಭವಾಯಿತು. ಅಂದಿನಿಂದ ಇಂದಿನವರೆಗೆ ಎಲ್ಲಾ ಪ್ರಕಾರಗಳಲ್ಲಿ ಸರಳ ಸೌಜನ್ಯತೆಯ ಸಂಬಂಧವನ್ನು ಬೆಸೆಯುತ್ತಾ, ಸಹೋದರತ್ವದ ಸಾಮೀಪ್ಯದಿಂದ, ಸಾಮೂಹಿಕ ಹಿತ ಸಾಧನೆಯ ಸರ್ವಶ್ರೇಷ್ಠ ಮನೋಭಾವದ ಸದಸ್ಯರ ಸಮ್ಮಿಲನದೊಂದಿಗೆ ಸಂಸ್ಥೆ ಗುರುತಿಸಿಕೊಂಡಿದೆ. ನಾಯಕತ್ವದ ಸಧೃಡತೆ ಹಾಗೂ ಸರ್ವರ ಸಹಭಾಗಿತ್ವದಿಂದ ಸತತ ಸಾಧನೆಯೊಂದಿಗೆ ಸಕ್ರಿಯವಾಗಿ ಗುರುತಿಸಿಕೊಂಡಿದೆ ನಿಖರವಾದ ನಿಯತ್ತಿನಿಂದ ಜನಪ್ರಿಯತೆಯ ದಾರಿಯನ್ನು ದಣಿವಿಲ್ಲದೆ ಕ್ರಮಿಸುತ್ತಿದೆ. ಈ ಸಂಬಂಧವಾಗಿ ಹಿರಿಮೆ-ಗರಿಮೆ, ಅಭಿಮಾನ-ಅಭಿನಂದನೆ ಅನನ್ಯವಾಗಿದೆ. ತೆರೆದ ಮನದವರಿರುವ ಸುಮನಸಾದ ಒಡಲಾಳವನ್ನು ಒಲುಮೆಯಿಂದ ಆಲಿಸ ಬಯಸುವರೆಲ್ಲರನ್ನು ಶಿರಭಾಗಿ ಸ್ವಾಗತಿಸುತ್ತೇವೆ ಹಾಗೂ ಅಪಾರ ಅನುಭವಗಳಿಗೆ ಅಕ್ಷರ ರೂಪ ಕೊಡುತ್ತಿದ್ದೇವೆ.

ಕಾರ್ಯಕ್ರಮಗಳು

 

© copyright 2014. All rights reserved. Sumanasa Kodavoor
Webpresence by Infouna Technologies Pvt. Ltd.